ಕರುಣೆ
A FINISHED WORK
✔ God's Mercy - ದೇವರ ಕರುಣೆ:
👉 "ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಜನೋಪಕಾರವೂ ಪ್ರತ್ಯಕ್ಷವಾದಾಗ 5 ನಾವು ಮಾಡಿದ ಪುಣ್ಯಕ್ರಿಯೆಗಳ ನಿವಿುತ್ತದಿಂದಲ್ಲ ಆತನ ಕರುಣೆಯಲ್ಲಿಯೇ ಪುನರ್ಜನ್ಮವನ್ನು ಸೂಚಿಸುವ ಸ್ನಾನದ ಮೂಲಕವಾಗಿಯೂ ಪವಿತ್ರಾತ್ಮನು ನಮ್ಮಲ್ಲಿ ನೂತನಸ್ವಭಾವವನ್ನು ಉಂಟುಮಾಡುವದರ ಮೂಲಕವಾಗಿಯೂ ಆತನು ನಮ್ಮನ್ನು ರಕ್ಷಿಸಿದನು. 6-7 ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಯನ್ನು ಪಡೆದು ಅದಕ್ಕೆ ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಸಮೃದ್ಧಿಯಾಗಿ ಸುರಿಸಿದನು. ಇದು ನಂಬತಕ್ಕ ಮಾತಾಗಿದೆ; (ತೀತ 3:4-7).
👉 ಪ್ರಿಯರೆ ಈ ವಚನಗಳಲ್ಲಿ ಬಹಳ ಮುಖ್ಯ ಸಂಗತಿಗಳಿವೆ . ಅತ್ಯಂತ ಪ್ರಮುಖವಾದದ್ದು ದೇವರ ಪ್ರೀತಿ. ಇದು ನಮಗಿರುವ ಎಲ್ಲ ಆಶೀರ್ವಾದಗಳ ಮೂಲವಾಗಿದೆ. ನಮ್ಮ ರಕ್ಷಣೆ , ಶುದ್ಧೀಕರಣ, ವಾಗ್ದಾನಗಳು ಮತ್ತು ಆತನ ಕೃಪೆಯಲ್ಲಿ ನಮಗಿರುವ ಭರವಸೆ ಇವೆಲ್ಲವೂ ನಮ್ಮ ದೇವರ ಕರುಣೆಯಿಂದಲೇ ಹೊರತು ನಮ್ಮ ಒಳ್ಳೆಯ ಕಾರ್ಯಗಳಿಂದಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ .
👉 ಕರುಣೆಯು ನಮ್ಮ ರಕ್ಷಕನಾದ ತಂದೆಯಾದ ದೇವರ ಅತ್ಯಂತ ಶ್ರೇಷ್ಠ ಗುಣಗಳಲ್ಲಿ ಒಂದಾಗಿದೆ. ಇದು ಕೃಪೆಗಿಂತ ಹೆಚ್ಚು ವೈಯಕ್ತಿಕವಾಗಿದೆ. ಕರುಣೆಯು ನಾವು ಪಾಪಿಗಳಾಗಿದ್ದಾಗ ಅನುಭವಿಸುತ್ತಿದ್ದ ಆಳವಾದ ಸಮಸ್ಯೆಗಳನ್ನು ಮತ್ತು ಅವಶ್ಯಕತೆಗಳನ್ನು ಅರಿತು ಯೇಸು ಕ್ರಿಸ್ತನು ನನ್ನನ್ನು ರಕ್ಷಿಸುವಂತೆ ಮಾಡಿತು. ನನ್ನನ್ನು ಕಂಡುಕೊಂಡಾಗ ಪಾಪಿಯಾಗಿ ನಾನು ಅನುಭವಿಸುತ್ತಿದ್ದ ಆಳವಾದ ತೊಂದರೆಗಳು ಮತ್ತು ಅಗತ್ಯಗಳನ್ನು ಕರುಣೆಯುಳ್ಳ ದೇವರು ಅರ್ಥಮಾಡಿಕೊಳ್ಳುತ್ತಾನೆ. ಕರುಣೆಯು ಕೃಪೆಗಿಂತ ಪ್ರತಿ ಪಾಪಿಯ ನಿರ್ದಿಷ್ಟ ಅಗತ್ಯಗಳ ಬಗ್ಗೆ ಕಾಳಜಿ ವಹಿಸುತ್ತದೆ. ಸತ್ಯವೇದ ಇದನ್ನು ವಿವಿಧ ಸ್ಥಳಗಳಲ್ಲಿ ತೋರಿಸುತ್ತದೆ.
👉 1ನೇ ತಿಮೊಥೆ ಅಧ್ಯಾಯ 1: 13ರಲ್ಲಿ ಪೌಲನು ತಿಮೊಥೆಯನಿಗೆ ಏನು ಹೇಳಿದನೆಂದು ನೋಡೋಣ. ಪೌಲನು ತನ್ನ ಮೊದಲಿನ ಜೀವಿತವನ್ನು ನೆನಸಿ : "ಮೊದಲು ದೂಷಕನೂ ಹಿಂಸಕನೂ ಬಲಾತ್ಕಾರಿಯೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ ತನ್ನ ಸೇವೆಗೆ ನೇವಿುಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು”. ಇಲ್ಲಿ ಪೌಲನು ಹೇಳುವಂತೆ ಅವನಿಗೆ ರಕ್ಷಣೆ ಸಿಕ್ಕಿದ್ದು ಯೇಸುವಿನ ಕೃಪೆಯಿಂದಲೇ ಆದರೆ ಸೌಲನನ್ನು ಕರ್ತನಾದ ಯೇಸು ಭೇಟಿಯಾಗುವಂತೆ ಮಾಡಿದ್ದು ಆತನ ಕರುಣೆಯೇ . ದೇವರ ಉದಾರ ಕೃಪೆಯು ತಾರ್ಸಸ್‌ನ ಸೌಲನನ್ನು ರಕ್ಷಿಸಿತು , ಆದರೆ ಕರ್ತನ ಕರುಣೆಯು ವಿರೋಧಿಯಾಗಿದ್ದ ಮತ್ತು ಪಾಪಿಯಾಗಿದ್ದ ಸೌಲನ ಕಡೆಗೆ ಹೋಗುವಂತೆ ಮಾಡಿತು.
✔ ಕರುಣೆಯುಳ್ಳ ಸಮರ್ಯಾದವ
👉 ಲೂಕನ ಸುವಾರ್ತೆ 10 ನೇ ಅಧ್ಯಾಯದಲ್ಲಿ ಒಳ್ಳೆಯ ಕರುಣೆಯುಳ್ಳ ಸಮರ್ಯಾದವನ ಬಗ್ಗೆ ತಿಳಿಸುವಂತೆ ಅಲ್ಲಿಯೂ ಕೂಡ ಆ ಕಥೆಯು ಕರುಣೆಯನ್ನು ಸುಂದರವಾಗಿ ವಿವರಿಸುತ್ತದೆ. ಒಬ್ಬ ವ್ಯಕ್ತಿ ಕಳ್ಳರಿಂದ ಗಾಯಗೊಂಡನು, ಮತ್ತು ವಿವಿಧ ಜನರು ಅವನನ್ನು ಕಂಡರೂ ಸುಮ್ಮನೆ ಆ ದಾರಿಯಲ್ಲಿ ಹಾದುಹೋದರು. ಆದರೆ ಒಬ್ಬ ಸಮಾರ್ಯದವನು ಗಾಯಗೊಂಡ ಆ ವ್ಯಕ್ತಿಯನ್ನು ನೋಡಿ ಅವನಿಗೆ ದಯೆ ತೋರಿಸಿದನು, ಅವನ ಗಾಯಗಳಿಗೆ ಆರೈಕೆ ಮಾಡಿದನು ಮತ್ತು ಅವನ ಸಂಪೂರ್ಣ ಆರೋಗ್ಯಕ್ಕಾಗಿ ಆ ಛತ್ರದವನ ಬಳಿ ಹೇಳಿ ಹಣ ಕೊಟ್ಟು ಹೋದನು” .ಅಲ್ಲಿ ಯೇಸು ಕೇಳಿದನು, "ಗಾಯಗೊಂಡ ಮನುಷ್ಯನಿಗೆ ಉತ್ತಮ ನೆರೆಯವನು ಯಾರು ಎಂದು ನೀವು ಭಾವಿಸುತ್ತೀರಿ?" ಎಂದು ಅದಕ್ಕೆ ಉತ್ತರ: "ಕರುಣೆ ತೋರಿಸಿದವನು.ಎಂದು . ಹಾಗೆಯೆ ಪ್ರಿಯ ದೇವ ಮಕ್ಕಳೇ " ದೇವರ ಕರುಣೆಯು ನಮ್ಮನ್ನು ವಯಕ್ತಿಕವಾಗಿ ನೋಡಿ , ನಾವು ಪಾಪಿಗಳಾಗಿದ್ದಾಗ ನಮಗಿರುವ ವಿಶೇಷ ಅಗತ್ಯತೆಗಳೇನು ಎಂದು ಗುರುತಿಸುತ್ತದೆ .
✔ ಕೃಪೆಯಿಂದಲೇ ರಕ್ಷಣೆ :
👉 ನಾವೆಲ್ಲರೂ ಕೃಪೆಯಿಂದ ರಕ್ಷಿಸಲ್ಪಟ್ಟಿದ್ದೇವೆ, ಆದರೆ ನಾವು ನೋವಿನಲ್ಲಿರುವಾಗ, ಕುಗ್ಗಿದಾಗ , ಸೈತಾನನಿಂದ ಭಾದಿಸಲ್ಪಟ್ಟಾಗ ನಮ್ಮೊಂದಿಗೆ ಇದ್ದು ಬಲಪಡಿಸುವುದು ದೇವರ ಕರುಣೆಯೇ. ದೇವರ ಕರುಣೆಯು ನಮ್ಮ ಗಾಯಗಳನ್ನು ಗುರುತಿಸಿ ಗುಣಪಡಿಸುತ್ತದೆ, ಆದರಣೆಯನ್ನು ಮತ್ತು ಬಲವನ್ನು ನೀಡುತ್ತದೆ . ಇದು ನಮ್ಮ ಬಲಹೀನತೆಯಲ್ಲಿ ನಮ್ಮನ್ನು ಪವಿತ್ರಾತ್ಮನ ಸಹಾಯದಿಂದ ಬಲಪಡಿಸುತ್ತದೆ. . ಯೇಸುವು ತನ್ನೊಂದಿಗೆ ನಮ್ಮನ್ನು ಕರೆದೊಯ್ಯಲು ಹಿಂದಿರುಗುವ ದಿನದವರೆಗೂ ಇದು ಮುಂದುವರಿಯುತ್ತದೆ. ಅದು ದೇವರ ಕರುಣೆಯೇ (ಯೂದ : 1:21). ಪ್ರಿಯ ದೇವಜನರೇ ನಾವು ಇನ್ನೊಬ್ಬರಿಗೆ ಕರುಣೆ ತೋರಿಸದಿದ್ದರೆ ನ್ಯಾಯತೀರ್ಮಾನದಲ್ಲಿ ನಮಗೆ ಕರುಣೆ ಸಿಕ್ಕುವದಿಲ್ಲ ಎಂದು ಯಾಕೋಬನು ತನ್ನ ಪತ್ರಿಕೆಯಲ್ಲಿ ಹೇಳಿದ್ದಾನೆ . (ಯಾಕೋಬ:2:13). .
👉 ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ನಮ್ಮ ರಕ್ಷಣೆಗೆ ಕಾರಣ ದೇವರ ಕೃಪೆಯೇ , ಆದರೆ ಕೆಲವರಿಗೆ ಮಾತ್ರ ಗೊತ್ತು ಅದು ದೇವರ ಕರುಣೆಯ ಮೇಲೆ ಆಧಾರಿತವಾಗಿದೆ ಎಂದು (ರೋಮ : 9:16). ದೇವರ ಕರುಣೆಯು ನಿಮ್ಮ ಹೃದಯವನ್ನು ನೋಡಿ, ನಿಮ್ಮ ಬಲಹೀನತೆಯನ್ನು ಮತ್ತು ಅಗತ್ಯಗಳನ್ನು ಅರಿತು ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ನಿಮ್ಮನ್ನು ಕರುಣಿಸಿ ಕ್ಷಮಿಸುತ್ತದೆ .
👉 ಯಾವಾಗ ಒಬ್ಬ ವ್ಯಕ್ತಿ ವಿಶ್ವಾಸಿಯಾಗುತ್ತಾನೋ ಆಗ ದೇವರ ಕರುಣೆ ಅವನ ಮೇಲಿಂದ ನಿಂತುಹೋಗುವುದಿಲ್ಲ . ನಿನ್ನ ಇಲ್ಲಿಯ ಜಿವಿತದವೆರಗೂ ನೀನು ಅದನ್ನು ಹೊಂದುತ್ತಲೇ ಇದ್ದಿ ಮತ್ತು ಕ್ರಿಸ್ತನ ಬರೋಣದವೆರಗೂ ಹೊಂದುತ್ತಲೇ ಇರುವಿ . ಆತನ ಶಾಶ್ವತ ಪ್ರೀತಿಯನ್ನು ಆಶ್ರಯಿಸಿರುವವರೆಲ್ಲರೂ ಹೊಂದುವರು . ನಮ್ಮ ಸ್ವಂತ ಒಳ್ಳೆಯ ಕಾರ್ಯಗಳು ದೇವರು ನಮ್ಮ ಮೇಲೆ ಕೃಪೆ ತೋರುವಂತೆಯೂ ಮತ್ತು ಕರುಣಿಸುವಂತೆಯೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವು ತಿಳಿದಿರಲೇಬೇಕು .
👉 ಕೆಲವು ಜನರು “ಕ್ರಿಸ್ತನು ಆ ಶಿಲುಬೆಯ ಮೇಲೆ ಮಾಡಿದ ಮಹಾ ಕಾರ್ಯದಿಂದ ನಾವು ರಕ್ಷಿಸಲ್ಪಟ್ಟಿದ್ದೇವೆ” ಎಂದು ನಂಬುತ್ತಾರೆ ಆದರೆ ಆ ರಕ್ಷಣೆಯನ್ನು ಕಾಪಾಡಿಕೊಳ್ಳಲು ಅವರು ಶ್ರಮಿಸಬೇಕು ಎಂದು ಭಾವಿಸುತ್ತಾರೆ ಆದರೆ ಅದು ನಿಜವಲ್ಲ .ಯಾಕೆಂದರೆ ದೇವರ ಕೃಪೆ ಮತ್ತು ಕರುಣೆ ಶಾಶ್ವತವಾದದ್ದು .
👉 ಈಗಲೂ ಅನೇಕರು ಆರಂಭದಲ್ಲಿ “ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಕೆಲಸದಿಂದ ರಕ್ಷಿಸಲ್ಪಟ್ಟಿದ್ದೇವೆ “ ಎಂದು ಭಾವಿಸುತ್ತಾರೆ, ಆದರೆ ಅವರು ತಮ್ಮ ರಕ್ಷಣೆಯನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಜೀವನದ ಉಳಿದ ಎಲ್ಲಾ ದಿನಗಳು ಒಳ್ಳೆಯಯವುಗಳಾಗಿರಬೇಕಾದರೆ ಶ್ರಮಿಸಬೇಕು , ಅನೇಕ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಹೇಳುತ್ತಾರೆ . ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆ ಮತ್ತು ಕರುಣೆಯು ನಮ್ಮೊಂದಿಗೆ ಶಾಶ್ವತವಾಗಿರುವಂತವು ಎಂದು ಬಹಳ ಜನರಿಗೆ ಇನ್ನು ತಿಳಿದಿಲ್ಲ .
👉 ಹೀಗೊಂದು ಆತ್ಮೀಕ ದೃಷ್ಟಾಂತ :
ಒಬ್ಬ ವಿಶ್ವಾಸಿ ರೈತನು ಬಹಳ ದಿನಗಳಿಂದ ಹಳ್ಳಿಯ ಕಮ್ಮಾರನಿಗೆ ದೇವರ ಕೃಪೆಯಿಂದ ರಕ್ಷಣೆಯ ಮಾರ್ಗ ಎಂದು ತಿಳಿಸಲು ಪ್ರಯತ್ನಿಸುತ್ತಿದ್ದನು, ಆದರೆ ಕಮ್ಮಾರನು ತನ್ನ ಮೋಕ್ಷಕ್ಕಾಗಿ ನಾವು ಶ್ರಮಿಸಬೇಕು ಎಂದು ನಿರಂತರವಾಗಿ ಭಾವಿಸುತ್ತಿದ್ದನು. ಒಳ್ಳೆಯವರು, ದಯೆ ಮತ್ತು ಕರುಣೆ ಇರುವವರು ಮತ್ತು ನೀತಿವಂತರು ಮಾತ್ರ ಸ್ವರ್ಗವನ್ನು ಪಡೆಯುತ್ತಾರೆ ಎಂದು ಕಮ್ಮಾರನು ಹೇಳುತ್ತಿದ್ದನು . ರೈತನು ಅವನೊಂದಿಗೆ ಅನೇಕ ಬಾರಿ ಕೃಪೆಯ ಬಗ್ಗೆ ತಿಳಿಸಲು ಮಾತನಾಡಿದನು, ಆದರೆ ಎಲ್ಲವೂ ವ್ಯರ್ಥವಾಯಿತು. ಹೀಗಿರುವಾಗ ಒಂದು ದಿನ ರೈತನು ತನ್ನ ಮನೆಯ ಮುಂಭಾಗದಲ್ಲಿರುವ ತೋಟದ ಆವರಣದ ಪ್ರವೇಶಕ್ಕೆ ಗೇಟ್ ಹಾಕಿಸುವ ಸಂದರ್ಭವು ಬಂದಿತು . ಅದನ್ನು ಕಬ್ಬಿಣದಲ್ಲಿ ಅಲಂಕೃತ ಮತ್ತು ಅತ್ಯಂತ ಕಲಾತ್ಮಕವಾಗಿ ಮಾಡಿಸಬೇಕೆಂದು ಬಯಸಿ ಕಮ್ಮಾರನಿಗೆ ಹೇಳಿದನು .
👉 ಇಂತಹ ಕೆಲಸಗಳಲ್ಲಿ ತನ್ನ ಕೌಶಲ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದ ಕಮ್ಮಾರನು ಗೇಟ್ ವಿನ್ಯಾಸ ಮಾಡುವದರಲ್ಲಿ ಹಲವು ಗಂಟೆಗಳನ್ನು ಕಳೆದನು . ನಿಗದಿತ ದಿನದಂದು ರೈತನು ತನ್ನ ಕಬ್ಬಿಣದ ಗೇಟ್ ಅನ್ನು ಒಯ್ಯಲು ಕಮ್ಮಾರನ ಬಳಿಗೆ ಹೋದನು. ಅಲ್ಲೇ ಕಮ್ಮಾರನ ಅಂಗಡಿಯ ಹೊರಗೆ ಇಟ್ಟಿದ್ದ ಗೇಟ್ ಸೊಬಗನ್ನು ಎಲ್ಲರೂ ನೋಡುವಂತೆ ನಿಂತಿತ್ತು . ರೈತ ಬಂದು ಹೊಸ ಗೇಟಿನತ್ತ ನೋಡುತ್ತಾ ಕಮ್ಮಾರನ ಅಂಗಡಿಯ ಹೊರಗೆ ಮಾತನಾಡುತ್ತ ನಿಂತ . ಅಷ್ಟರಲ್ಲೇ ಕಮ್ಮಾರ ಅಂಗಡಿಯಿಂದ ಹೊರಗೆ ಬಂದು ಅವನ ಜೊತೆ ನಿಂತ . ಆ ಗೇಟ್ ಉತ್ತಮ ಕಲಾಕೃತಿಯಾಗಿತ್ತು. ಆಗಲೇ ಅನೇಕರು ಅದನ್ನು ಮೆಚ್ಚಿಕೊಂಡಿದ್ದರು. ಇಂತಹ ವಿನ್ಯಾಸ ಗೇಟ್ ಮೇಲೆ ಇದೆ ಅದ್ಬುತ ಎಂದು . ಎಲ್ಲವನ್ನು ಅಚ್ಚು ಕಟ್ಟಾಗಿ ಮಾಡಿದ್ದಾನೆ ಎಂದು ಪ್ರಶಂಶಿಸುತ್ತಿದ್ದರು ಜನರೆಲ್ಲ.
👉 ರೈತನು ಕೆಲವು ಕ್ಷಣ ಮೌನವಾಗಿ ನಿಂತನು, ಮತ್ತು ಬಗ್ಗಿ ಸುತ್ತಿಗೆ ಮತ್ತು ಉಳಿ ತೆಗೆದನು. ಅವನು ಅಚ್ಚುಕಟ್ಟಾಗಿದ್ದ ಆ ಗೇಟ್ ಗೆ ಸುತ್ತಿಗೆಯಿಂದ ಏಟು ಹಾಕಲು ಹೊರಟಿದ್ದ. ಕಮ್ಮಾರನು ಗಾಬರಿಗೊಂಡನು ಮತ್ತು ತಕ್ಷಣವೇ ಕೋಪಗೊಂಡನು ಮತ್ತು ರೈತನ ಆ ಸುತ್ತಿಗೆ ಏಟು ತಾನು ಮಾಡಿದ ಅತ್ಯಂತ ವಿನ್ಯಾಸಕರವಾದ ಗೇಟ್ ನ ಆಕೃತಿಯನ್ನು ಹಾಳು ಮಾಡಬಹುದು ಎಂದು ಗಾಬರಿಯಾದ "ಇದು ಈಗ ಮುಗಿದ ಕೆಲಸ! ಇನ್ನೇನು ಈ ಗೇಟಿಗೆ ಮಾಡುವ ಅವಶ್ಯಕತೆಯಿಲ್ಲ ಎಂದು ಗಾಬರಿಯಿಂದ ರೈತನಿಗೆ ಹೇಳಿದ .
👉 ನಂತರ ರೈತನು ಕಮ್ಮಾರನ ಮುಖ ನೋಡಿ “ ಕಲ್ವಾರಿ ಶಿಲುಬೆಯ ಮೇಲೆ ಕರ್ತನಾದ ಯೇಸು ಕ್ರಿಸ್ತನು ಪೂರ್ಣಗೊಳಿಸಿದ ರಕ್ಷಣೆಯ ಕೆಲಸದಲ್ಲಿ ದೇವರ ಕೃಪೆ ಮತ್ತು ಕರುಣೆಯ ಛಾಯೆಯನ್ನು ನೋಡುತ್ತೇವೆ ಎಂದು ಸ್ವತಃ ಅವನಿಗೆ ಪ್ರಸ್ತುತಪಡಿಸುತ್ತಾನೆ - ರಕ್ಷಣೆಗಾಗಿ ಪರಿಪೂರ್ಣ ಕೆಲಸ. ಕಮ್ಮಾರನು ಇಷ್ಟುದಿನಗಳ ಕಾಲ ಮೋಕ್ಷಕ್ಕಾಗಿ ಎಲ್ಲ ಕಾರ್ಯಗಳನ್ನು ಮಾಡಲು ಪ್ರಯತ್ನಿಸುವಲ್ಲಿ ತನ್ನದೇ ಆದ ಒಂದು ದೊಡ್ಡ ಸ್ವವಿಚಾರದ ಗುಮಟವನ್ನು ಕಟ್ಟಿದ್ದ . ಶಿಲುಬೆಯ ಮೇಲೆ ಕ್ರಿಸ್ತನ ಕೆಲಸದ ಮುಂದೆ ನಮ್ಮ ಯಾವ ಕಾರ್ಯಗಳು ನಮ್ಮ ನರಕದಿಂದ ಬಿಡಿಸಲು ಸಾಧ್ಯವಿಲ್ಲ ಎಂದು ಆತನಿಗೆ ಗೊತ್ತಿರಲಿಲ್ಲ . ಕಮ್ಮಾರನು ತಾನು ಪರಿಪೂರ್ಣವಾಗಿ ಮಾಡಿದ ಆ ಗೇಟ್ ನ ವಿನ್ಯಾಸವನ್ನು ಬೇರೆಯವರು ತಿದ್ದಲು ಹೋಗುವುದು ಮೂರ್ಖತನವಾಗಿ ಕಂಡಿರುವಾಗ ಕರ್ತನಾದ ಯೇಸು ಶಿಲುಬೆಯ ಮೇಲೆ ಮಾಡಿದ ಕೆಲಸವನ್ನು ತಮ್ಮ ಪುಣ್ಯಕಾರ್ಯಗಳ ನಿಮಿತ್ತ ಪೂರ್ಣಗೊಳಿಸಲು ಹೋಗುವುದು ಕೂಡ ಶತಮೂರ್ಖತನ ಎಂದು ಆತನಿಗೆ ತಿಳಿಯಲಿಲ್ಲ . ದೈವಿಕ ಕೃಪೆಯಿಂದ ಅವನಿಗೆ ನೀಡಲಾದ ಉಚಿತ ರಕ್ಷಣೆ ,ಪರಿಪೂರ್ಣ, ಸಂಪೂರ್ಣ, ಮುಗಿದಿದೆಯೇ? ಹೌದು ಮುಗಿದಿದೆ ಅದನ್ನು ಕಮ್ಮಾರನು ನೋಡಿದನು ಮತ್ತು ನಂಬಿದನು.
ಆದ್ದರಿಂದ ನಮ್ಮ ಮೋಕ್ಷವು ಕಾರ್ಯಗಳಿಂದಲ್ಲ . ಇದು ಕೃಪೆಯಿಂದ , ನಮ್ಮ ರಕ್ಷಕನಾದ ದೇವರ ದಯೆ ಮತ್ತು ಪ್ರೀತಿಯಲ್ಲಿ ನಮಗೆ ದೊರಕಿದೆ . ಆದರೆ ಇದು "ಅವನ ಕರುಣೆಗೆ ಅನುಗುಣವಾಗಿ" ಕೂಡ ಆಗಿದೆ. ಯೇಸು ನನ್ನನ್ನು ಸಹ ಪ್ರೀತಿಸುತ್ತಾನೆ. ನಮ್ಮ ರಕ್ಷಣೆಯು ನಮ್ಮ ಕೆಲಸಗಳ/ಪುಣ್ಯಕಾರ್ಯಗಳ ಮೇಲೆ ಅಲ್ಲ; ಅದು ದೇವರ ಕೃಪೆ ಮತ್ತು ಕರುಣೆಯಿಂದ, ಉಚಿತ, ಪರಿಪೂರ್ಣ ಮತ್ತು ಸಂಪೂರ್ಣವಾಗಿದೆ.
0 ಕಾಮೆಂಟ್‌ಗಳು