ಯಜ್ಞದ ಕುರಿಯಾದಾತನು - Lamb of The Lord

ಯಜ್ಞದ ಕುರಿಯಾದಾತನು 


        ನಮ್ಮ ಕನ್ನಡ ಬೈಬಲ್ ಸ್ಟಡಿ / ಕನ್ನಡ ಬೈಬಲ್ ಅಧ್ಯಯನ “ ವೆಬ್ಸೈಟ್ ಗೆ ಭೇಟಿ ನೀಡಿ ಸಂದೇಶಗಳನ್ನು ಓದುತ್ತಿರುವ ಎಲ್ಲ ಪ್ರಿಯ  ದೇವಜನರಿಗೂ ಕರ್ತನಾದ ಯೇಸು ಕ್ರಿಸ್ತನ ನಾಮದಲ್ಲಿ ವಂದನೆಗಳು 

            ಪ್ರಿಯರೆ ನಾವಾದರೋ ನಮ್ಮ ರಕ್ಷಕನೂ , ಯಜ್ಞದ ಕುರಿಯಾದಾತನೂ ಆದ ಯೇಸು ಕ್ರಿಸ್ತನ ರಕ್ಷಣೆಯ ಆನಂದವನ್ನು ಅನುಭವಿಸುತ್ತ ಆತನ ಎರಡನೇ ಬರೋಣಕ್ಕಾಗಿ ಕಾಯುತ್ತಿದ್ದೇವೆ . ಆದರೆ ಆತನಲ್ಲಿ ನಂಬಿಕೆಯಿಡದ ಅನೇಕ ಅನ್ಯಜನರು ಯಜ್ಞದ ಕುರಿಯಾದಾತನ ಮಹಿಮೆಯನ್ನು ಅರಿಯದೆ ನರಕಪಾತ್ರರಾಗುತ್ತಿದ್ದಾರೆ . ಅಂಥವರೆಲ್ಲ ಯಜ್ಞದ ಕುರಿಯಾದಾತನ ಬಗ್ಗೆ ತಿಳಿಯುವುದು ಅತ್ಯವಶ್ಯವಾಗಿದೆ.

     👉 ಯಾರು ಆ ಯಜ್ಞದ ಕುರಿಯಾದಾತನು ? 





        ಆದಿಕಾಂಡ :22:7:  ರಲ್ಲಿ “ಹೋಮಕ್ಕೆ ಬೇಕಾದ ಕುರಿ ಎಲ್ಲಿ ? … ಎಂಬ ಯೇಸು ಕ್ರಿಸ್ತನ ಮುನ್ಸೂಚನೆಯಾಗಿ ಕೇಳಲ್ಪಟ್ಟ ಪ್ರಶ್ನೆಗೆ ಸ್ನಾನಿಕನಾದ ಯೋಹಾನನು ತನ್ನ ಸುವಾರ್ತೆ ಪುಸ್ತಕವಾದ  ಯೋಹಾನ : 1:29 ರಲ್ಲಿ ಯೇಸು ಕ್ರಿಸ್ತನನ್ನು ನೋಡಿ - “ ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವವನು “ ಎಂದು ಹೇಳಿದನು .  ಯಾಕಂದರೆ ಯೇಸು ಕ್ರಿಸ್ತನು ಬರುವದಕ್ಕಿಂತ ಮುಂಚೆ ಇಸ್ರಾಯೇಲ್ಯರು  ತಮ್ಮ ಪಾಪಗಳ ಪರಿಹಾರಕ್ಕಾಗಿ ಎಂದಿಗೂ ಪಾಪ ನಿವಾರಣೆ ಮಾಡಲಾರದಂಥ  ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಿದ್ದರು .(ಇಬ್ರಿಯ :10:11-12) . ಆದರೆ ತಂದೆಯಾದ ದೇವರಿಂದ ನೇಮಿಸಲ್ಪಟ್ಟ ಯಜ್ಞದ ಕುರಿ ಯೇಸು ಕ್ರಿಸ್ತನು ತನ್ನನ್ನು ತಾನೇ ಬರಿದು ಮಾಡಿಕೊಂಡು ಎಲ್ಲ ಕಾಲಕ್ಕೂ ನಿಲ್ಲುವ ಒಂದೇ ಯಜ್ಞವಾಗಿ ಸ್ವಂತ ರಕ್ತವನ್ನೇ ಸಮರ್ಪಿಸಿ ಎಲ್ಲಾ ಮನುಷ್ಯರಿಗಾಗಿ ನಿತ್ಯ ವಿಮೋಚನೆಯನ್ನು ಸಂಪಾದಿಸಿಕೊಂಡನು . 

    👉 ಯಜ್ಞದ ಕುರಿಯಾದ ಯೇಸು ಕ್ರಿಸ್ತನು ಲೋಕಕ್ಕೆ ಏಕೆ ಬಂದನು  ?

1) ಸ್ವರ್ಗದ ಮಾರ್ಗವನ್ನು ನಮಗೆ ತೋರಿಸಲು (ಯೋಹಾನ 14:6)

2) ಸೈತಾನನು ಎಂಬ ವೈರಿಯಿಂದ ನಮ್ಮನ್ನು ಬಿಡಿಸಲು (ಇಬ್ರಿಯ 2:14):

3) ಪಾಪವೆಂಬ ಸೆರೆಮನೆಯಿಂದ ನಮ್ಮನ್ನು ಬಿಡಿಸಲು (ಇಬ್ರಿಯ 2:15)

4) ನಮ್ಮ ಬಲಹೀನತೆಯಲ್ಲಿ ನಮಗೆ ಸಹಾಯ ಮಾಡಲು(ಇಬ್ರಿಯ : 2:16-18).

5) ನಮ್ಮನ್ನು ನಮ್ಮ ಪಾಪಗಳಿಂದ ಬಿಡಿಸಲು ಬಂದನು (ಯೋಹಾ

1:29)

6) ನಮಗೆ ನಿತ್ಯಜೀವವನ್ನು ಕೊಡಲು ಬಂದನು (ಯೋಹಾನ:3:16)


 👉 ಯಜ್ಞದ ಕುರಿಯಾದ ಯೇಸು ಕ್ರಿಸ್ತನು ಲೋಕಕ್ಕೆ ಬಂದು ಏನು ಮಾಡಿದನು   ?

ಪ್ರಿಯ ಓದುಗರೇ ನಮಗಾಗಿ ಅಗೋಚರ ಬೆಳಕಿನಲ್ಲಿ ವಾಸಮಾಡುತ್ತಿದ್ದ ರಕ್ಷಕನು ಧೂಳಿಗೆ ಸಮಾನರಾದ ಮನುಷ್ಯರ ಲೋಕದಲ್ಲಿ ಜೀವಿಸುತ್ತ  ಅವರ ಕಷ್ಟಗಳಿಗೆ ಸ್ಪಂದಿಸಿ , ರೋಗದಲ್ಲಿ ಬಿದ್ದವರನ್ನು ಗುಣಪಡಿಸಿದನು, ಜನರು ಕಳಕೊಂಡಿದ್ದ ತಮ್ಮ ಸತ್ತವರನ್ನು ಜೀವಂತವಾಗಿ ಎಬ್ಬಿಸಿದನು  , ಹಸಿದವರ ಹಸಿವೆಯನ್ನು ನೀಗಿಸಿದನು, ಅನೇಕ ದೈವಿಕ ಸತ್ಯಾರ್ಥಗಳನ್ನು ಜನರಿಗೆ ಬೋಧಿಸಿದನು , ಪರಲೋಕದ ಗೂಡಾರ್ಥಗಳನ್ನು ಬಿಡಿಸಿ ಹೇಳಿದನು , ಕಟ್ಟ ಕಡೆಗೆ ಅದೇ ಜನರಿಗಾಗಿ ತನ್ನ ಪ್ರಾಣವನ್ನೇ ಕೊಟ್ಟನು . 

    ✔ ನಾವು ಯಜ್ಞದ ಕುರಿಯಾದಾತನ ಬಗ್ಗೆ  ಏಕೆ ತಿಳಿಯಬೇಕು ?

        ಪ್ರಿಯರೆ ನಿಮಗಾಗಿ ನಮಗಾಗಿ ಅಷ್ಟೆಲ್ಲ ತ್ಯಾಗವನ್ನು ಮಾಡಿದ ಬಹು ತಾಳ್ಮೆಯುಳ್ಳ , ಮಾನವರ ಮೇಲೆ ಕರುಣೆವುಳ್ಳ , ಅವರನ್ನು ತನ್ನ ರಕ್ತ ಸುರಿಸಿ ಕೊಂಡುಕೊಂಡ ನಿಜ ದೇವರ ಬಗ್ಗೆ ತಿಳಿಯುವುದು ಎಲ್ಲರ ಕರ್ತವ್ಯವಾಗಿದೆ . ಆದರೆ ಈ ಮಹಾ ತ್ಯಾಗವನ್ನು ಅರ್ಥ ಮಾಡಿಕೊಳ್ಳದ ಜನರು ಮಾನವರಿಗಾಗಿ ಯಜ್ಞದ ಕುರಿಯಾದ ಯೇಸು ಕ್ರಿಸ್ತನನ್ನು ತಾತ್ಸಾರ ಮಾಡುತ್ತಾ ಹಗುರವಾಗಿ ಮಾತಾಡುತ್ತಾ “ ಇವನು ಮೊಳೆ ಜಡಿಸಿಕೊಂಡವನು , ಮುಳ್ಳಿನ ಕಿರೀಟ ತೊಟ್ಟವನು , ಜನರಿಂದ ಹೊಡೆಯಲ್ಪಟ್ಟು ಶಿಲುಬೆ ಮೇಲೆ ಸತ್ತವನು “ ಎಂದು ಆತನ ಶ್ರಮೆಯ ಹಿಂದಿನ ಮಹಾತ್ಯಾಗವನ್ನು , ವರ್ಣಿಸಲು ಅಸಾಧ್ಯವಾದ ಪ್ರೀತಿಯನ್ನು ಅರಿಯದೆ ಮಾತಾಡುತ್ತಾರೆ . ಆದರೆ ಸತ್ಯವೇದದಲ್ಲಿ ಯೇಸು ಕ್ರಿಸ್ತನ ಶಿಷ್ಯನಾದ ಯೋಹಾನನು ಸತ್ಯವೇದದ ಕೊನೆಯ ಹಾಗೂ ಪ್ರವಾದನೆ ಪುಸ್ತಕವಾದ ಪ್ರಕಟಣೆಯಲ್ಲಿ “ಯಜ್ಞದ ಕುರಿಯಾದಾತನ ಎರಡನೇ ಬರೋಣದಿಂದ ಲೋಕದಲ್ಲಿ ಉಂಟಾಗುವ ನ್ಯಾಯತೀರ್ಪು , ಕಷ್ಟ,ಸಂಕಟಗಳನ್ನು ಹಾಗೂ ಆತನ ರಕ್ತದಿಂದ ಪಾಪ ವಿಮೋಚನೆಯನ್ನು ಹೊಂದಿದ ವಿಶ್ವಾಸಿಗಳಿಗೆ ಉಂಟಾಗುವ ಆಶೀರ್ವಾದಗಳನ್ನು ತಿಳಿಸುತ್ತಾ ಸರಿ ಸುಮಾರು “28 ಸಾರಿ “ ಯಜ್ಞದ ಕುರಿಯಾದಾತನು “ ಎಂದು ಉಲ್ಲೇಖಿಸಿ ಬರೆದಿದ್ದಾನೆ . 


   👉 ಯಜ್ಞದ ಕುರಿಯಾದಾತನೂ ಆತನ ಭಕ್ತರಿಗೆ/ವಿಶ್ವಾಸಿಗಳಿಗೆ ಏನಾಗಿದ್ದಾನೆ ?

                 ಯಜ್ಞದ ಕುರಿಯಾದ ಯೇಸು ಕ್ರಿಸ್ತನು 

🌟 ಆತನ ವಿಶ್ವಾಸಿಗಳಿಗೆ ಕುರುಬನಾಗಿರುವನು (ಪ್ರಕಟಣೆ :7:17), 

🌟  ಅವರು ಆತನ ರಕ್ತದ ಬಲದಿಂದಲೂ ವಾಕ್ಯದ ಬಲದಿಂದಲೂ ಸೈತಾನನನ್ನು ಜಯಿಸುವರು (ಪ್ರಕಟಣೆ :12:11), 

🌟 ಕರ್ತಾದಿ ಕರ್ತನು ರಾಜಾದಿ ರಾಜನು ಆಗಿರುವ ಯಜ್ಞದ ಕುರಿಯಾದಾತನ ಜಯದಲ್ಲಿ ಆತನ ಮಕ್ಕಳೆಲ್ಲರೂ ಪಾಲುಗಾರರಾಗುವರು (ಪ್ರಕಟಣೆ :17:14), 

🌟  ಆತನಿಂದ ನಿತ್ಯಜೀವವನ್ನು ಹೊಂದಿದವರೆಲ್ಲರೂ ಆತನೊಂದಿಗೆ ಜೀವಿಸುತ್ತಾ ಯುಗಯುಗಾಂತರಗಳಲ್ಲಿಯೂ ಆಳುವರು . (ಪ್ರಕ:22:5).


 👉 ಯಜ್ಞದ ಕುರಿಯಾದಾತನೂ ಆತನ ತಿರಸ್ಕರಿಸಿದ / ನಂಬಿಕೆಯಿಡದ ಜನರಿಗೆ  ಏನಾಗಿದ್ದಾನೆ ?

        ಆದರೆ ಯಜ್ಞದ ಕುರಿಯಾದಾತನಾದ ಯೇಸುಕ್ರಿಸ್ತನನ್ನು ನಂಬದ/ಆತನ ಸುವಾರ್ತೆಯನ್ನು
ತಿರಸ್ಕರಿಸುವ ಮತ್ತು ನಿಜವಾದ ಸುವಾರ್ತೆಗೆ ಒಳಪಡದ ಜನರಿಗಾದರೋ ಆತನು ಕುರಿಯಾಗಿ
ಅಲ್ಲ ಬದಲಿಗೆ ಯೂದಾ ಕುಲದ ಸಿಂಹವಾಗಿ ಬರುತ್ತಾನೆ (ಪ್ರಕ : 5:5),
ಆಗ ಅವರೆಲ್ಲರೂ ಯೇಸು ಕ್ರಿಸ್ತನ  ಕೋಪಕ್ಕೆ ಹೆದರಿ ಬಂಡೆಗಳಿಗೂ
ಬೆಟ್ಟಗಳಿಗೂ - ನಮ್ಮ ಮೇಲೆ ಬೀಳಿರಿ ಎಂದು ಹೇಳುವರು .(ಪ್ರಕ:6:16).

LION OF JUDAH

    ಕೊನೆಯದಾಗಿ ಆತನನ್ನು ನಂಬದೆ ಇರುವ ಎಲ್ಲಾ ಜನರು ಯಜ್ಞದ ಕುರಿಯಾದಾತನ ಅಂದರೆ ಯೇಸು ಕ್ರಿಸ್ತನ ಮುಂದೆ ಹಾಗೂ ಪರಲೋಕದ ದೇವದೂತರ ಮುಂದೆ ಬೆಂಕಿಯಿಂದಲೂ ಗಂಧಕದಿಂದಲೂ ಉರಿಯುವ ನರಕದಲ್ಲಿ ಹಾಕಲ್ಪಟ್ಟು ನಿತ್ಯಕಾಲಕ್ಕೂ ಯಾತನೆ ಪಡುವರು . (ಪ್ರಕ:14;10). ಅವರ ಯಾತನೆಗೆ , ಅವರು ಪಡುವ ನರಳಾಟಕ್ಕೆ ನೋವಿಗೆ ಅಲ್ಲಿ ಅಂತ್ಯವೇ ಇರುವುದಿಲ್ಲ . 

ಪ್ರಿಯ ಓದುಗರೇ , ಆಲೋಚಿಸಿರಿ !!!!!!! ನಿಮ್ಮ ಶಾಶ್ವತ ಸ್ಥಳ ಯಜ್ಞದ ಕುರಿಯಾದ ಯೇಸುಕ್ರಿಸ್ತನು ಇರುವ ಸ್ವರ್ಗವೋ ? ಅಥವಾ ನಿತ್ಯಕಾಲಕ್ಕೂ ಸಂಕಟ ಪಡುವ ಸ್ಥಳ ನರಕವೋ ? 

ಈ ಹೊತ್ತೇ ನಿರ್ಧರಿಸಿ … ಯೇಸು ಕ್ರಿಸ್ತನು ನಿಮ್ಮ ಹೃದಯಗಳನ್ನು ತೆರೆಯಲಿ .. 

                                                                                                        By - Bro Prabhu



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು