ಯೇಸುವಿನ ತಾಯಿ ಮರಿಯಳು(ಭಾಗ-2)

 

ಯೇಸುವಿನ ತಾಯಿ ಮರಿಯಳು(ಭಾಗ-2).


ಯೇಸುವಿನ ತಾಯಿ ಮರಿಯಳು(ಭಾಗ-1)-   ಓದಿದ ನಂತರ ಭಾಗ-2 ಓದಿರಿ. 

 ಯೇಸು ಕ್ರಿಸ್ತನ ಅದ್ಭುತ ಕಾರ್ಯಗಳನ್ನು ಮರಿಯಳು ಕೂಡ ನಂಬಿದಳು . ಸೃಷ್ಟಿ ಕರ್ತನಿಗೆ ಜನ್ಮ ಕೊಟ್ಟಂತ ಮರಿಯಳು ತಾನೇ ತನ್ನ ಮಗನಿಗೆ ವಿಧೇಯಳಾದಳು. ತನ್ನ ಶಾರೀರಿಕ  ಮಗನಿಗೆ ಆತ್ಮಿಕ  ಮಗಳಾದಳು.  ಯಾಕಂದರೆ ಅವಳು ಕೂಡ ಪಾಪದಲ್ಲಿಯೇ ಜನಿಸಿದಳು ಅವಳು ಕೂಡ ತನ್ನ ಮಗನ ಮೇಲೆ ನಂಬಿಕೆ ಇಟ್ಟು ರಕ್ಷಣೆ ಹೊಂದಿದಳು . 


ಪ್ರಿಯ ದೇವ ಜನರೇ ಮರಿಯಳು ಇಷ್ಟೆಲ್ಲಾ ಸಂಗತಿಗಳನ್ನು ನೋಡುತ್ತಾ ಇದ್ದರು ಕೊನೆಗಳಿಗೆಯಲ್ಲಿ, 

* ಯಾವ ಮಗುವನ್ನು ಮರಿಯಳು ಯೆರೂಸಲೇಮಿನ ಬೀದಿಯಲ್ಲಿ ಕೈ ಹಿಡಿದು ನಡೆಸಿದಳು ಅದೇ ಮಗನಿಗೆ ಯೆರೂಸಲೇಮಿನ ಬೀದಿಯಲ್ಲಿ ಹೊಡೆಯುವುದನ್ನು ಹೀಯಾಳಿಸುವುದನ್ನು ಅವಳು ನೋಡಿದಳು.

* ಯಾವ ಮಗುವಿಗೆ ಪ್ರೀತಿ ನಂಬಿಕೆ ಆತ್ಮಿಕ ಪಾಠಗಳನ್ನು ದೈವಿಕ ಸತ್ಯಗಳನ್ನು ಹೇಳುತ್ತಾ ಬೆಳೆಸಿದ್ದಳೊ ಆ ಮಗುವಿಗೆ ಕೊರಡೆಗಳಿಂದ ದೇಹಕ್ಕೆ ಹೊಡೆಯುತ್ತಾ ಇದ್ದರು. 

* ಯಾವ ಮಗುವನ್ನುಎತ್ತಿ ಆಡಿಸಿದ್ದಳೊ, ಯಾವ ಪುಟ್ಟ ಮಗುವಿನ ಕೈಗಳನ್ನು ಅಂದರೆ ಯೇಸು ಮಗುವಾಗಿದ್ದಾಗ ಆ ಬಾಲ ಯೇಸುವಿನ ಕೈಗಳನ್ನು ಹಿಡಿದು ನಡೆಯಲು ಕಲಿಸಿದ್ದಳೊ ಅದೇ ಕೈಗಳಿಗೆ  ಮೊಳೆಗಳನ್ನು ಜಡಿಯುತ್ತಾ ಇದ್ದರು,

* ಯಾವ ಮಗುವಿನ ತಲೆಯನ್ನು ಸವರಿ ಮುದ್ದಿಸಿ ಬೆಳೆಸಿದಳು ಅದೇ ತಲೆಗೆ ಸೈನಿಕರು ಮುಳ್ಳಿನ ಕಿರೀಟವನ್ನು ಹಾಕಿದ್ದರು. 

* ಯಾವ ಮಗುವನ್ನು ಮರಿಯಳು ಎತ್ತಿಕೊಂಡು ಕಾಲುಗಳಿಗೆ ಮುದ್ದಿಸಿ ನಡೆಯುವುದನ್ನು ಕಲಿಸಿದ್ದಳೊ ಅದೇ ಕಾಲುಗಳಿಗೆ ಮೊಳೆಗಳನ್ನು ಜಡಿಯುತ್ತಾ ಇದ್ದರು, 

* ಯಾವ ಮಗುವನ್ನು ಬಾಲ್ಯದಿಂದ ಸಾಕಿ ಬೆಳೆಸಿ ದೊಡ್ಡವನಾಗಿ ಮಾಡಿದ್ದಳೊ ಅದೇ ಮಗುವನ್ನು ರೋಮ್ ಸೈನಿಕರು ಕ್ರೂಜೆಯ  ಮೇಲೆ ಹಿಂಸಿಸುತ್ತಾ  ಇದ್ದರು. ಆ ಮರಿಯಳ ಮುದ್ದು ಮಗನೇ  ಯೇಸುಕ್ರಿಸ್ತನು


ಕರ್ತನಲ್ಲಿ  ಪ್ರೀತಿಯುಳ್ಳ ಜನರೇ ನಾವು ಲೋಕದ ತಾಯಿಯನ್ನ ನೋಡುವಾಗ ನಮಗೆ ನೋವಾಗುವುದನ್ನು ನಮಗೆ ಕಷ್ಟಗಳು ಬರುವುದನ್ನು ಆ ಹೆತ್ತ ಕರುಳು ತಾಳುವುದಿಲ್ಲ , ಹಾಗಾದರೆ ಅಷ್ಟೊಂದು ನೋವುಗಳಲ್ಲಿ ಅವಮಾನಗಳಲ್ಲಿ ಮಗುವನ್ನು ಹೆತ್ತು ಸಾಕಿ ಬೆಳೆಸಿದ ಆ ತಾಯಿಗೆ ಈ ಎಲ್ಲಾ ನೋವುಗಳನ್ನು,  ಹಿಂಸೆಗಳನ್ನು ತನ್ನ ಮಗನಿಗೆ ಕೊಡುವಾಗ ಎಷ್ಟು ನೋವಾಗಿರಬೇಕು ಊಹಿಸಿರಿ...................................

                                    ತನ್ನ ಮಗನನ್ನು ಶಿಲುಬೆಯ ಮೇಲೆ ತುಗಾಡುತ್ತಿದ್ದನ್ನು ನೋಡಿ ಮರಿಯಳ ಹೃದಯದಲ್ಲಿ ಅಲಗು ನೆಟ್ಟಂತಾಯಿತು.  ಯೇಸುವಿನಂತೆ ಆಕೆಯು ಸಹ ಸಂಕಟವೆಂಬ ಕಹಿ ರಸವನ್ನು ಕೊನೆಯ ತೊಟ್ಟಿನವರೆಗೂ ಕುಡಿದಳು . ಕೊನೆಯ ಗಳಿಗೆವರೆಗೂ ಆಕೆ ಯೇಸುವಿನ ಸಂಗಡ ಇದ್ದಳು . ಆತನ ಎಲ್ಲಾ ಯಾತನೆಯನ್ನು ನೋವನ್ನು ಆಕೆ ಕಣ್ಣಾರೆ ಕಂಡಳು . ಆತನನ್ನು ಅಪಹಾಸ್ಯ ಮಾಡಿ ಹೀಯಾಳಿಸುವುದನ್ನು ಕಿವಿಯಾರೇ ಕೇಳಿದಳು .  ಎಲ್ಲರಿಗೂ ಪ್ರಿಯನಾಗಿದ್ದ ಆಕೆಯ ಮಗನು ಯಾರು ಸಹಿಸಲಾರದಷ್ಟು ಸಂಕಟವನ್ನು ಶಿಲುಬೆಯ ಮೇಲೆ ಸಹಿಸಿದನು.  ಕ್ರೂಜೆಯ ಸಮೀಪದಲ್ಲಿ ನಿಂತುಕೊಂಡಿದ್ದ ಮರಿಯಳು ಆತನೊಂದಿಗೆ ತಾನೂ ಸಂಕಟವನ್ನು ಅನುಭವಿಸಿದಳು. ಅವಳು ದೇವರಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರಿಂದ ಅದನ್ನೆಲ್ಲ ಸಹಿಸಿಕೊಂಡಳು.  ಪ್ರಿಯರೇ ಆಲೋಚಿಸಿರಿ ಎಷ್ಟು ನೋವು ಆ ತಾಯಿಗೆ ಆಗಿರಬೇಕು ! ಎಷ್ಟೋ ಜನರು ಅವಳ ಮುಂದೆ ಅವಳ ಮಗನನ್ನು "ನಿಮ್ಮ ಮಗನು ನಮ್ಮನ್ನು ಗುಣಪಡಿಸಿದನು,  ನಮಗೆ ಆಹಾರ ಕೊಟ್ಟನು , ಇಂತ ಅದ್ಭುತ ಕಾರ್ಯಗಳನ್ನು ಮಾಡಿದನು" ಎಂಬುದಾಗಿ ಹೇಳಿ  ಅವಳ ಮುಖದಲ್ಲಿ ನಗುವನ್ನು ತಂದಿದ್ದರೊ  ಅದೇ ಜನರು ಶಿಲುಬೆಯ ಮೇಲಿರುವಂತ ಯೇಸುವನ್ನು ನೋಡಿ ಪರಿಹಾಸ್ಯ ಮಾಡುತ್ತಿದ್ದರು. ಶಿಲುಬೆಯ ಮೇಲಿದ್ದ ಯೇಸು ತನ್ನ ತಾಯಿಯ ಮರಿಯಳನ್ನು ಮರೆಯದೆ ಅವಳ ಬಗ್ಗೆ  ಶಿಲುಬೆಯ ಮೇಲೆ ನುಡಿದ ತನ್ನ ಸಪ್ತ ನುಡಿಗಳಲ್ಲಿ  ಒಂದು ಮಾತು ತನ್ನ ತಾಯಿಗಾಗಿ ನುಡಿದನು.  (ಯೋಹಾನ :19:25).
    ಪ್ರಿಯರೇ ಕ್ರೂಜೆಯ ಬಳಿಯಲ್ಲಿ ಕಾಣಿಸಿಕೊಂಡ ಮರಿಯಳು ಯೇಸುಕ್ರಿಸ್ತನ ಪರಲೋಕ ಆರೋಹಣದ ನಂತರವೂ ಯೇಸು ಸ್ವಾಮಿಯ ಶಿಷ್ಯರೊಂದಿಗೆ ಇತರ ಸ್ತ್ರೀಯರೊಂದಿಗೆ ಮತ್ತು ತನ್ನ ಮಕ್ಕಳೊಂದಿಗೆ ಸತ್ಯವೇದದಲ್ಲಿ ಕಾಣಿಸಿಕೊಳ್ಳುತ್ತಾಳೆ (ಅಪೋ:1:9-14) . ತನ್ನ ಮಗನನ್ನು ಕಳೆದುಕೊಂಡಿದ್ದ ಆಕೆ ತನಗೆ ಆದ ವೈಯಕ್ತಿಕ ಕಷ್ಟದ ಬಗ್ಗೆ ಚಿಂತಿಸಲಿಲ್ಲ,  ಆದರೆ ತಾನು ಆತನಿಗಾಗಿ ಮಾಡಬೇಕಾಗಿದ್ದ ಕರ್ತವ್ಯವು ಸಂಪೂರ್ಣವಾಯಿತು ಎಂಬ ತೃಪ್ತಿಯನ್ನು ಮರಿಯಳು ಹೊಂದಿದ್ದಳು . ಅವಳಿಗೆ ಯಾವ ಹಕ್ಕು ಬೇಕಿರಲಿಲ್ಲ , ತನ್ನನ್ನು ಬೇರೆಯವರೊಂದಿಗೆ ಸರಿಸಮಾನ ಮಾಡಿಕೊಂಡಳು, ತನ್ನ ವೈಯಕ್ತಿಕ ಇಚ್ಛೆಗಳನ್ನು ಕಡೆಗಣಿಸಿ ತನ್ನನ್ನು ಸಂಪೂರ್ಣವಾಗಿ ದೇವರ ಘನತೆಗಾಗಿ ಒಪ್ಪಿಸಿಕೊಟ್ಟಳು .  ಯೇಸುವಿನೊಂದಿಗೆ ಆಕೆ ಕಳೆದ 30 ವರ್ಷಗಳ ಕಾಲ ಬಹು ಸಂತೋಷವಾಗಿದ್ದಳು ಆದರೆ ಅದೇ ಸಮಯದಲ್ಲಿ ಬೇರೆ ಯಾವ ಸ್ತ್ರೀಯು ಲೋಕದಲ್ಲಿ ಅನುಭವಿಸದ ಸಂಕಟವನ್ನು ನೋವನ್ನು ಆಕೆ ಅನುಭವಿಸಿದಳು.  ಆ ದೇವದೂತನಿಗೆ "ಇಗೋ,  ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ" ಎಂಬ ತನ್ನ ಮಾತಿನಂತೆ ಆಕೆ ನಡೆದುಕೊಂಡಳು. ತನ್ನ ಜೀವನದಿಂದ ಅದನ್ನು ನಿರೂಪಿಸಿದಳು.  ಮರಿಯಳು ಯೇಸುವಿನ ಜೊತೆ ಆತನ ಜೀವನದುದ್ದಕ್ಕೂ ಇದ್ದಳು . ಆತನ ಸಮಾಧಿಯವರೆಗೂ ಇದ್ದಳು.

 ಪ್ರಿಯ ದೇವ ಜನರೇ ಮರಿಯಳು ಶಿಲುಬೆಯ ಮೇಲೆ ನೋಡುತ್ತಿರುವುದು - " ಬೇತ್ಲೆಹೇಮೆನ ಮಗು , ನಜರೇತಿನ ಯೌವನಸ್ಥ, ಬಡಗಿ ಕೆಲಸ ಮಾಡುವ ಪರಿಶ್ರಮಿ, ಗಲಿಲಾಯದ ಸಭ್ಯಸ್ತ, ಜ್ಞಾನಿಗಳಿಗೆ ಕಲಿಸುವ ಮಹಾಜ್ಞಾನಿ, ಅದ್ಭುತಗಳನ್ನು ಮಾಡಿದ ಕರುಣಾಮಯಿ, ಸಹನೆಯ ಶಾಂತ ಮೂರ್ತಿಯನ್ನು ತಾಳ್ಮೆಯ ರಾಜನನ್ನು"  ಆಕೆ ಶಿಲುಬೆಯ ಮೇಲೆ ನೋಡುತ್ತಾ ಇದ್ದಳು . ಅವನೇ ಅವನು  ಮರಿಯಳ ಮಗನು ಶಿಲುಬೆಯ ಮೇಲೆ ಕೈ ಕಾಲುಗಳಲ್ಲಿ ಮೊಳೆ ಜಡಿಯಲ್ಪಟ್ಟವನಾಗಿ ನಿಂತಿದ್ದಾನೆ (ಯೋಹಾನ :19:25). ಯೇಸುವಿನ ತಲೆ ಕಾಲು ಕೈಗಳಿಂದ ಇಡೀ ಶರೀರದಿಂದ  ರಕ್ತ ಸೋರುತ್ತಾ ಇತ್ತು. ಅವಳ ರಕ್ತ ಕ್ರಿಸ್ತನಲ್ಲಿ ಸುರಿಸಲ್ಪಟ್ಟಿತ್ತು. ಎಲ್ಲ ತಾಯಂದಿರಿಗಿಂತ ಹೆಚ್ಚು ನೋವು ಯಾರು ಅನುಭವಿಸಲಿಲ್ಲ ಮರಿಯಳು ಮಾತ್ರವೇ ಅನುಭವಿಸಿದಳು. 

     ಮರಿಯಳು  ತನ್ನನ್ನು ತಗ್ಗಿಸಿಕೊಂಡು ಮಗನ ಮೇಲೆ ನಂಬಿಕೆ ಇಟ್ಟಳು. ಪ್ರಿಯ ದೇವ ಜನರೇ ಆ ಮಹಾ ರಕ್ಷಕನಿಗೆ ತಾಯಿಯಾಗಿದ್ದರು ಕೂಡ ಅವಳಿಗೆ ರಕ್ಷಣೆಯು , ನಂಬಿಕೆಯು ಹೇಗೆ ಅವಶ್ಯವಾಗಿತ್ತೊ ಹಾಗೆಯೇ ಪ್ರಿಯ ದೇವ ಜನರೇ ಪ್ರತಿಯೊಬ್ಬರಿಗೂ ಯೇಸುಕ್ರಿಸ್ತನ ಮುಖಾಂತರವಾಗಿ ಪಾಪ ಕ್ಷಮಾಪಣೆಯು ಹೊಂದುವುದು ಅವಶ್ಯವಾಗಿದೆ. " ಮರಿಯಳ ತಾಯಿ ಆಗಿದ್ದಕ್ಕೆ ಅವಳು ಸ್ವರ್ಗದಲ್ಲಿಲ್ಲ ಮಗನಲ್ಲಿ ನಂಬಿಕೆ ಇಟ್ಟಿದ್ದರಿಂದ ವೈಯಕ್ತಿಕ ರಕ್ಷಕನಾಗಿ ಸ್ವೀಕರಿಸಿದ್ದರಿಂದ ಅವಳು ರಕ್ಷಣೆ ಹೊಂದಿದ್ದಾಳೆ ಹಾಗೂ ಸ್ವರ್ಗಕ್ಕೆ ಸೇರಿಸಲ್ಪಟ್ಟಿದ್ದಾಳೆ" ಯೇಸು  ಕ್ರಿಸ್ತನು ಮನುಷ್ಯನಾಗಿ ಬಂದು ದೇವರಾಗಿಲ್ಲ, ದೇವರಾದವನು ಮನುಷ್ಯನಾಗಿ ಬಂದು ಮರಿಯಳ ಮುಖಾಂತರ ಲೋಕದ ಇತಿಹಾಸವನ್ನು ಪ್ರವೇಶಿಸಿದನು.  ನಮ್ಮ ರಕ್ಷಕನು ಕನ್ನಿಕೆಯಾದ ಮರಿಯಳ ಮುಖಾಂತರ ಹೊರಗಿನ ಲೋಕದಿಂದ ಅಂದರೆ ಪರಲೋಕದಿಂದ ನಮ್ಮ ಲೋಕಕ್ಕೆ ಬಂದನು. ಹಾಗೆಯೇ ಹೊರಗಿರುವ ಯೇಸು ಈ ಹೊತ್ತು ನಮ್ಮ ಹೃದಯದಲ್ಲಿ ಬರಬೇಕು ಹಾಗಾದರೆ ಯೇಸು ಅವಳಿಗೆ ರಕ್ಷಕನಾದನು ನಿಮ್ಮ ಹೃದಯದಲ್ಲಿ ಕ್ರಿಸ್ತನು ಇದ್ದಾನೋ ? (  ರೋಮಾ:3:23). ಎಲ್ಲರೂ  ಪಾಪದಲ್ಲಿ ಹುಟ್ಟುತ್ತಾರೆ ಹಾಗೆಯೇ ಮರಿಯಳು ಕೂಡ ಪಾಪದಲ್ಲಿ ಹುಟ್ಟಿದವಳು ಅವಳಿಗೂ ರಕ್ಷಕನ ಪಾಪ ವಿಮೋಚಕನ ಅವಶ್ಯಕತೆ ಇತ್ತು.  ಹಾಗಾದರೆ ನಮ್ಮ ನಿಮ್ಮ ಸ್ಥಿತಿ ಏನು? ನಮಗೂ ರಕ್ಷಕನ ನಮ್ಮ ಪಾಪದ ವಿಮೋಚಕನ ಅವಶ್ಯಕತೆ ಇದೆಯಲ್ಲವೇ ?ಹಾಗಾದರೆ ವಿವೇಚಿಸಿರಿ!!!!!!

ನಾವು ಕೂಡ ಪಾಪದಲ್ಲಿ ಜನಿಸಿ ಪಾಪದಲ್ಲಿ ಸಾಯುವರಾಗಿದ್ದೇವೆ ಹಾಗಾದರೆ ನಮಗೆ ಮರಿಯಳಿಗಿಂತ  ಹೆಚ್ಚು ನಮ್ಮ ರಕ್ಷಕನ ಅವಶ್ಯಕತೆ ಇದೆ .                     

    ಪ್ರಿಯ ದೇವ ಜನರೇ ನಾನು ಒಬ್ಬ ಸೇವಕನ ಮಗನಾಗಿದ್ದೇನೆ, ಮಗಳಾಗಿದ್ದೇನೆ ಕಾರಣ ನಾನು ಕೂಡ ಸ್ವರ್ಗಕ್ಕೆ ಹೋಗುತ್ತೇನೆ ಅಥವಾ ನಾನು ಈ ಸೇವಕರ ಹೆಂಡತಿಯಾಗಿದ್ದೇನೆ, ನಾನು ಪಾಸ್ಟರನ ತಂಗಿ, ನಾನು ಈ ಸೇವಕೀಯ ಗಂಡನಾಗಿದ್ದೇನೆ, ನನ್ನ ತಾಯಿ ಸೇವಕಿಯಾಗಿದ್ದಾಳೆ,  ಹೀಗಾಗಿ ನಾನು ರಕ್ಷಿಸಲ್ಪಟ್ಟಿದ್ದೇನೆ. ಎಂದು ಎಂದಿಗೂ ನೆನೆಸಬೇಡಿರಿ.  ಅವರ ರಕ್ಷಣೆ ಅವರಿಗೆ ಮಾತ್ರ ಸೀಮಿತವಾಗಿದೆ. ನಿಮಗೆ ವೈಯಕ್ತಿಕವಾಗಿ ರಕ್ಷಕನು ಇಲ್ಲದಿದ್ದರೆ, ನಿಮಗೆ ವಯಕ್ತಿಕವಾಗಿ ನಿಮ್ಮ ಪಾಪದ ವಿಮೋಚಕನ ಪರಿಚಯ ನಿಮಗಿಲ್ಲದಿದ್ದರೆ ನಿಮಗೆ ರಕ್ಷಣೆಯು ಅಸಾಧ್ಯ.  ನಾವು ಕೂಡ ಲೋಕದಲ್ಲಿ ವೈಯಕ್ತಿಕವಾಗಿ ಯೇಸುವಿನ ಮೇಲೆ ನಂಬಿಕೆ ಇಟ್ಟು ಪಾಪ ಪರಿಹಾರ ಹೊಂದುವುದು, ಯೇಸುಕ್ರಿಸ್ತನನ್ನು ನಂಬುವುದು  ಅವಶ್ಯವಾಗಿದೆ.  ಪರಿಶುದ್ಧಾತ್ಮನು ರಕ್ಷಣೆಯ ಕುರಿತು ನಿಮಗೆ ತಿಳಿಸಲು ಸಹಾಯ ಮಾಡಲಿ.  

    ದೈವ ಜನರೇ ಮನುಷ್ಯಳಾದ ಮರಿಯಳು ಇಷ್ಟೆಲ್ಲಾ ತ್ಯಾಗಗಳನ್ನು ಮಾಡಿದ್ದಕ್ಕಾಗಿ ನಾವು ಅವಳನ್ನು ಶ್ರೇಷ್ಠಳು ಎಂಬುದಾಗಿ ಕರಿಯುವುದಾದರೆ ಇನ್ನು ನಮ್ಮ ದೇವರು ಸೃಷ್ಟಿಕರ್ತನು ರಕ್ಷಕನು ಆದ  ಯೇಸುಕ್ರಿಸ್ತನು ತನ್ನ ಮಹಿಮೆಯನ್ನು, ವೈಭವವನ್ನು , ಸ್ವರ್ಗವನ್ನು, ದೇವದೂತರ ಆರಾಧನೆಯನ್ನು , ತ್ಯಜಿಸಿ ಕನಿಷ್ಠ ಲೋಕಕ್ಕೆ ಬಂದಿದ್ದಾನೆ ಆತನು ನಮಗಾಗಿ ಇನ್ನೂ ಏನೆಲ್ಲಾ ತ್ಯಾಗಗಳನ್ನು ಮಾಡಿದ್ದಾನೆ ತಿಳಿಯೋಣ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ...

                                                                                                            -Bro. Prabhu 

ಯೇಸುವಿನ ತಾಯಿ ಮರಿಯಳು(ಭಾಗ-1) ಓದಿಲ್ಲವೇ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ


                     -ಯೇಸುವಿನ ತಾಯಿ ಮರಿಯಳು(ಭಾಗ-1)-1 Comments

Post a Comment
Previous Post Next Post