ಪ್ರವಾದಿ ಯೋನನು ಭಾಗ-1(Prophet Jonah)

ಪ್ರವಾದಿ ಯೋನನು ಭಾಗ-1


        ತಂದೆಯಾದ ದೇವರ ಮತ್ತು ಕರ್ತನಾದ ಯೇಸುಕ್ರಿಸ್ತನ ಕೃಪೆಯಿಂದ ಜೀವಿಸುತ್ತಿರುವ ಎಲ್ಲಾ ದೇವ ಜನರಿಗೂ ವಂದನೆಗಳು. ಈ ಸಂಚಿಕೆಯ ಮೂಲಕ ಹಳೆ ಒಡಂಬಡಿಕೆಯ (ಪ್ರವಾದಿ ಯೋನನು)ಯೋನನ ಪ್ರವಾದನೆ ಪುಸ್ತಕದಿಂದ ಕೆಲವು ಆತ್ಮಿಕ ಸತ್ಯಗಳನ್ನು, ಪಾಠಗಳನ್ನು ಪವಿತ್ರಾತ್ಮನ ಸಹಾಯದಿಂದ ಅಧ್ಯಯನ ಮಾಡಲು ಪ್ರಯತ್ನ ಪಡೋಣ.

👉 ಹಿನ್ನೆಲೆ : 
    ಯೋನ ಎಂಬ ಹೆಸರು ಗ್ರೀಕ್ ನ 'ಅಯೋನಾಸ್ ' ಎಂಬ ಪದದಿಂದ ಬಂದಿದೆ. 'ಅಯೋನಾಸ್ 'ಇದರ ಅರ್ಥ ಪಾರಿವಾಳ .ಯೋನನ ಪುಸ್ತಕವನ್ನು ಓದುವಾಗ ಅವನು ಕೂಡ ಪಾರಿವಾಳದ ಹಾಗೆ ಬುದ್ಧಿ ವಿವೇಕವಿಲ್ಲದವನ ಹಾಗೆ ಕಾಣುತ್ತಾನೆ(ಹೋಶೇಯ:7:11).

👉 ದೇವರ ಸೇವೆಗೆ ಕರೆ :

NINEVE AND TARSHISH


        ಯೋನನನ್ನು ದೇವರು ನಿನೆವೆ ಪಟ್ಟಣದ ಜನರಿಗೆ ಎಚ್ಚರಿಕೆ ನೀಡಲು ಕಳುಹಿಸುತ್ತಾನೆ. ಏಕೆಂದರೆ ನಿನೆವೆ ಜನರು ದುಷ್ಟರಾಗಿದ್ದರು(ಯೋನ:1:1). ಆದರೆ ಯೋನನು ನಿನೆವೆ ಹೋಗದೆ ತಾರ್ಷೀಷಿಗೆ ಹೋದನು. ಯಾಕೆ ಇವನನು ನಿನೆವೆಗೆ ಹೋಗಲಿಲ್ಲ ಎಂಬದಾಗಿ ನೋಡುವಾಗ ನಿನೆವೆ ಜನರು ಇಸ್ರಾಯೇಲ್ಯರ ವೈರಿಗಳು ಮತ್ತು ಅನ್ಯರು ಆಗಿದ್ದರು .ಇಸ್ರಾಯೇಲ್ಯರ ವೈರಿಗಳಾಗಿದ್ದ ನಿನೆವೆ ಪಟ್ಟಣದ ಜನರು ದೇವರ ಕಡೆಗೆ ಮಾನಸಂತರ ಹೊಂದಿ ದೇವರಿಂದ ಆಶೀರ್ವಾದ ಪಡೆಯುವುದು ಯೋನನಿಗೆ ಇಷ್ಟವಿರಲಿಲ್ಲ. ಅದಕ್ಕೆ ಆತನು ನಿನೆವೆಗೆ ವಿರುದ್ಧ ಪಶ್ಚಿಮಕ್ಕೆ ಇರುವ ತಾರ್ಷೀಷಿಗೆ ಹೋದನು .
            ಪ್ರಿಯ ದೇವಜನರೇ ದೇವರು ಯಾವಾಗಲೂ ಬರಿ ಒಳ್ಳೆಯವರನ್ನೇ ಮಾತ್ರ ಪ್ರೀತಿಸುವುದಿಲ್ಲ . ಆತನು ಎಲ್ಲರನ್ನು ಪ್ರೀತಿಸುವವನಾಗಿದ್ದಾನೆ . ಆದುದರಿಂದಲೇ ದೇವರು ಹೀಗೆ ಹೇಳುತ್ತಾನೆ "ದುಷ್ಟರು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ "ಎಂದು ಯೆಹೆಜ್ಕೇಲ:18:23 ,32 ಹೇಳಿದ್ದಾನೆ.ರಕ್ಷಣೆ ಹೊಂದಿದ ನಾವು ಕೂಡ ದುಷ್ಟ ಜನರಿಗಾಗಿ ಅವರ ರಕ್ಷಣೆಗಾಗಿ ಪ್ರಾರ್ಥಿಸುವುದು ಅತ್ಯವಶ್ಯವಾಗಿದೆ .

👉 ಸೇವಕನ ಅವಿಧೇಯತೆ :   
         ಯೋನ 1:3-6 ಆದರೆ ಯೋನನು ಯೆಹೋವನ ಸನ್ನಿಧಿಗೆ ತಪ್ಪಿಸಿಕೊಳ್ಳುವ ಹಾಗೆ ತಾರ್ಷೀಷಿಗೆ ಓಡಿಹೋಗಬೇಕೆಂದು ಹೊರಟು ಯೊಪ್ಪಕ್ಕೆ ಇಳಿದು ಅಲ್ಲಿ ತಾರ್ಷೀಷಿಗೆ ತೆರಳುವ ಹಡಗನ್ನು ಕಂಡು ಬಾಡಿಗೆಕೊಟ್ಟು ಯೆಹೋವನ ಸನ್ನಿಧಿಯಿಂದ ತಾರ್ಷೀಷಿಗೆ ಪ್ರಯಾಣಮಾಡಬೇಕೆಂದು ಹಡಗಿನವರೊಡನೆ ಅದನ್ನು ಹತ್ತಿದನು.

            ಬಳಿಕ ಯೆಹೋವನು ಬಿರುಗಾಳಿಯನ್ನು ಸಮುದ್ರದ ಮೇಲೆ ಬಲವಾಗಿ ಬೀಸಲು ಸಮುದ್ರದಲ್ಲಿ ದೊಡ್ಡ ತುಫಾನು ಎದ್ದು ಹಡಗು ಒಡೆದುಹೋಗುವ ಹಾಗಾಯಿತು.

    
           
     ಆಗ ನಾವಿಕರು ಹೆದರಿ ತಮ್ಮ ತಮ್ಮ ದೇವರುಗಳಿಗೆ ಮೊರೆಯಿಟ್ಟು ತಮ್ಮ ಕಷ್ಟವು ಕಡಿಮೆಯಾಗುವ ಹಾಗೆ ಹಡಗಿನ ಸಾಮಾನುಗಳನ್ನು ಸಮುದ್ರಕ್ಕೆ ಬಿಸಾಟುಬಿಟ್ಟರು. ಇಷ್ಟರೊಳಗೆ ಯೋನನು ಹಡಗಿನ ಒಳಭಾಗಕ್ಕೆ ಇಳಿದು ಮಲಗಿಕೊಂಡಿದ್ದನು; ಗಾಢನಿದ್ರೆ ಹತ್ತಿತ್ತು.

                ಹೀಗಿರಲು ಹಡಗಿನ ಯಜಮಾನನು ಅವನ ಬಳಿಗೆ ಬಂದು - ಇದೇನು, ನಿದ್ದೆ ಮಾಡುತ್ತೀ! ಎದ್ದು ನಿನ್ನ ದೇವರಿಗೆ ಮೊರೆಯಿಡು; ಒಂದು ವೇಳೆ ನಿನ್ನ ದೇವರು ನಮ್ಮನ್ನು ರಕ್ಷಿಸಾನು, ನಾಶವಾಗದೆ ಉಳಿದೇವು ಎಂದು ಹೇಳಿದನು.)

                ಯೋನನು ದೇವರ ಮಾತನ್ನು ಕೇಳದೆ ತಾರ್ಷೀಷಿಗೆ ಹೋಗಲು ಪ್ರಯತ್ನಿಸಿ ಹಡಗನ್ನು ಹತ್ತಿ ಪ್ರಯಾಣಿಸುವಾಗ ದೇವರು ಅವನಿಗೆ ಬುದ್ಧಿ ಕಲಿಸಲು ದೊಡ್ಡ ಬಿರುಗಾಳಿ ಬೀಸುವಂತೆ ಮಾಡಿದನು(ವ:1:4) . ಪ್ರಿಯರೇ ಒಂದು ವೇಳೆ ನಾವು ಕೂಡ ದೇವರ ಸಭೆಗೆ ಹೋಗುವುದನ್ನು ಬಿಟ್ಟಿದ್ದರೆ , ಪ್ರಾರ್ಥನೆ ಮಾಡುವುದನ್ನು , ವಾಕ್ಯ ಓದುವುದನ್ನು ದೇವರ ಸೇವೆಯಲ್ಲಿ ಸಹಾಯ ಮಾಡುವುದನ್ನು ಬಿಟ್ಟು ದೂರವಾಗಿದ್ದರೆ ನಮಗೂ ಕೂಡ ದೇವರು ತನ್ನ ಸೃಷ್ಟಿಯನ್ನು ಉಪಯೋಗಿಸಿಕೊಂಡು ಬುದ್ಧಿ ಕಲಿಸುತ್ತಾನೆ . ಅನಾರೋಗ್ಯ ಸಮಸ್ಯೆ ಚಿಂತೆ ಬರುವಾಗ ನಾವು ಕೂಡ ನಮ್ಮನ್ನು ಸರಿಪಡಿಸಿಕೊಂಡು ಕರ್ತನ ಚಿತ್ತದಂತೆ ನಡೆಯುವುದು ಅವಶ್ಯವಾಗಿದೆ. ಈ ಯೋನನ ಅವಿಧೇಯತೆಯಿಂದಾಗಿ ಬಂದ ಬಿರುಗಾಳಿಯಿಂದ ಹಡಗು ಒಡೆಯುವ ಹಾಗೆ ಆಗಿ ಹಡಗಿನಲ್ಲಿದ್ದ ಎಲ್ಲ ಜನರು ತೊಂದರೆಯನ್ನು ಅನುಭವಿಸುವಂತೆ ಆಯಿತು .
                ಆಗ ಹಡಗಿನಲ್ಲಿ ಇದ್ದ ಅನ್ಯರಾದ ಪ್ರಯಾಣಿಕರು ತಮ್ಮ ತಮ್ಮ ನಿಜವಲ್ಲದ ದೇವರಿಗೆ ಮೊರೆಯಿಡಲು ಪ್ರಾರಂಭಿಸಿದರು ಆದರೆ ಯೋನನಾದರೂ ನಿದ್ರಿಸುತ್ತಿದ್ದನು. ಆಗ ಹಡಗಿನ ಯಜಮಾನನು ಬಂದು ಯೋನನಿಗೆ ನಿನ್ನ ದೇವರಿಗೆ ನಾವೆಲ್ಲರೂ ಉಳಿಯುವಂತೆ ಮೊರೆ ಇಡು ಎಂದು ಹೇಳಿದರು(ಯೋನ 1:6). 
            ಪ್ರಿಯರೇ ಆ ಅನ್ಯರಾದ ಪ್ರಯಾಣಿಕರು ತಮ್ಮ ತಮ್ಮ ನಿಜವಲ್ಲದ ದೇವರುಗಳಿಗೆ ಮೊರೆಯಿಟ್ಟು ,ಜೀವ ಸ್ವರೂಪನಾದ ದೇವರನ್ನು ಆರಾಧಿಸುವ ಯೋನನಿಗೆ ಮೊರೆ ಇಡಲು ಹೇಳುತ್ತಿದ್ದಾರೆ .ಇದು ದೇವ ಭಕ್ತರಿಗೆ ನಾಚಿಕೆಯ ಸಂಗತಿ ಏಕೆಂದರೆ ನಿಜ ದೇವರನ್ನು ಜೀವ ಸ್ವರೂಪನಾದ ದೇವರನ್ನು ಪ್ರಾರ್ಥನೆಯನ್ನು ಕೇಳುವ ದೇವರನ್ನು ತಿಳಿದ ನಾವು ಅನ್ಯರಿಂದ ಪ್ರಾರ್ಥನೆ ಮಾಡಿರಿ ಮೊರೆಯಿಡಿರಿ ಎಂಬದಾಗಿ ಎಂದಿಗೂ ಹೇಳಿಸಿಕೊಳ್ಳಬಾರದು. ಸುಳ್ಳು ದೇವರನ್ನು ಅವಲಂಬಿಸಿರುವವರು ಅಷ್ಟು ಮೊರೆ ಇಡುವಾಗ ಇನ್ನು ಜೀವಿಸುವ ಮತ್ತು ಸತ್ಯ ದೇವರನ್ನು ತಿಳಿದ ನಾವುಗಳು ವಿಶ್ವಾಸಿಗಳು ಇನ್ನೆಷ್ಟು ಪ್ರಾರ್ಥನೆ, ವಿಜ್ಞಾಪನೆ ಗಳನ್ನು ಸ್ತುತಿ ಆರಾಧನೆಗಳನ್ನು ಮಾಡಬೇಕು ಆಲೋಚಿಸಿರಿ. 
            
                ಇಂತ ಪ್ರವಾದಿಯಾದ ಯೋನನನ್ನು ರಕ್ಷಕನಾದ ಯೇಸುಕ್ರಿಸ್ತನಿಗೆ ಹೋಲಿಸಲಾಗಿದೆ. (ಮತ್ತಾಯ :12:39 & ಮಾರ್ಕ:11:29) .ಹಾಗಾದರೆ ನಿಜವಾಗಿಯೂ ಯೋನನ ಮತ್ತು ಯೇಸುಕ್ರಿಸ್ತನ ಗುಣಗಳು ಹೊಂದಾಣಿಕೆಯಾಗಿವೆಯೋ ಒಮ್ಮೆ ನೋಡೋಣ1. 

ಯೋನನು

ಯೇಸುಕ್ರಿಸ್ತನು

2.    

ಯೆಹೂದ್ಯ ಪ್ರವಾದಿ
ಯೆಹೂದ್ಯ ಪ್ರವಾದಿ

3.    

ಮನುಷ್ಯನ ಮಗನು(ಅವಿುತ್ತೈಯ ಮಗ) :1:1ಯೇಸುಕ್ರಿಸ್ತನು ದೇವ ಕುಮಾರನು ಮತ್ತು ಮನುಷ್ಯ ಕುಮಾರನು.ಯೋಹಾನ:1:34,49 & 51

4.   

ನಿನೆವೆ ಜನರಿಗೆ ಬರಿ ನ್ಯಾಯ ತೀರ್ಪಿನ ಬಗ್ಗೆ ಸಾರಿದನು.ಯೇಸುಕ್ರಿಸ್ತನು ಲೋಕದ ಎಲ್ಲ ಜನರಿಗೆ ದೇವರ ಪ್ರೀತಿ, ಕೃಪೆ ಮತ್ತು ರಕ್ಷಣೆ ವಿಷಯವಾಗಿ ಸಾರಿದನು.(ಯೋಹಾನ:3:16)

5.    

ಕೇವಲ ನಿನೆವೆ ಪಟ್ಟಣಕ್ಕಾಗಿ ಕಳುಹಿಸಲ್ಪಟ್ಟನು
ಯೇಸುಕ್ರಿಸ್ತನು ಲೋಕದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳಿಗಾಗಿ ಕಳುಹಿಸಲ್ಪಟ್ಟನು.(ಯೋಹಾನ:3:16)

6.  

ಯಾವ ಪಟ್ಟಣಕ್ಕಾಗಿ ಯೋನನು ಕಳುಹಿಸಲ್ಪಟ್ಟನು. ನಿನೆವೆ ಪಟ್ಟಣದ ಜನರಲ್ಲಿ ಅವನಿಗೆ ಪ್ರೀತಿ ಇರಲಿಲ್ಲ
ದೇವರಿಗೆ ವೈರಿಗಳು ಆವಿದೆಯರು ಭಕ್ತಿಹೀನರು ಪಾಪಿಗಳು ಆದ ನಮಗಾಗಿ ಕ್ರಿಸ್ತನು ಶಿಲುಬೆಯ ಮೇಲೆ ಪ್ರಾಣ ಕೊಟ್ಟನು

7. 

ದೇವರ ಮಾತನ್ನು ಮೊದಲನೇ ಸಾರಿ ಕೇಳಲಿಲ್ಲ
ಕ್ರಿಸ್ತನು ವಾಗಲೂ ದೇವರ ಮಾತಿನಂತೆ ಮತ್ತು ಚಿತ್ತದಂತೆ ನಡೆದನು .ಕರ್ತನ ಚಿತ್ತದಂತೆ ಪಾಪಿಗಳಿಗಾಗಿ ತನ್ನ ಪ್ರಾಣ ಕೊಟ್ಟನು

8.

ಯೋನನು ದುಷ್ಟರಾದ ನಿನೆವೆ ಪಟ್ಟಣದವರು ನಾಶವಾಗುತ್ತಾರೋ ಇಲ್ಲವೋ ಎಂದು ನೋಡುವುದಕ್ಕಾಗಿ ಪಟ್ಟಣದ ಹೊರಗೆ ಕೂತನು .4:5

ಯೇಸುಕ್ರಿಸ್ತನು ಪಾಪಿಗಳಿಗಾಗಿ ಪಟ್ಟಣದ ಹೊರಗೆ ಸತ್ತನು ಮತ್ತು ತನ್ನನ್ನು ಹಿಂಸಿಸಿ ಕೊಲ್ಲುವವರಿಗಾಗಿ ಕ್ಷಮಾಪಣೆ ಕೇಳಿದನು

9.  

ದೇವರ ಮಾತನ್ನು ಕೇಳದೆ ಇದ್ದಿದ್ದರಿಂದ ಇದ್ದದರಿಂದ ಮೀನಿನ ಹೊಟ್ಟೆಯೊಳಗೆ ಮೂರು ದಿನ ಹಗಲಿರುಳು ಇರಬೇಕಾಯಿತು.1:17

ಯೇಸುಕ್ರಿಸ್ತನು ಮನುಷ್ಯರನ್ನು ನಿತ್ಯ ನರಕದಿಂದ ತಪ್ಪಿಸುವುದಕ್ಕಾಗಿ ಮೂರು ದಿನ ಹಗಲು ರಾತ್ರಿ ಭೂಗರ್ಭದೊಳಗೆ ಇದ್ದನು .ಮತ್ತಾಯ:12:39

10.  

ಮೀನಿನ ಹೊಟ್ಟೆಯೊಳಗೆ ದೇವರನ್ನು ಪ್ರಾರ್ಥಿಸಿ ಕೊಂಡಾಡಿದನುಯೇಸು ಕ್ರಿಸ್ತನಾದರೂ ಶಾರೀರಿಕವಾಗಿ ಸತ್ತು ಭೂಗರ್ಭದಲ್ಲಿ ಇದ್ದರೂ ಆತ್ಮಿಕವಾಗಿ ಜೀವಿಸಿ ನೋಹನ ಕಾಲದಲ್ಲಿ ಇದ್ದ ಜನರಿಗೆ ಅಂದರೆ ದೇವರಿಗೆ ಅವಿದೆಯರಾಗಿದ್ದವರ ಆತ್ಮಗಳ ಬಳಿಗೆ ಹೋಗಿ ಸುವಾರ್ತೆ ಸಾರಿದನು 1 ಪೇತ್ರ:3.19-20.

11.👉 ಸೇವಕನ ಅವಿಧೇಯತೆಯ ಪರಿಣಾಮ :  

                     ಪ್ರತಿಯೊಬ್ಬ ಸೇವಕರು ಓದಲೇ ಬೇಕಾದ ಸಂದೇಶ 
                  ಓದಿ     👉 ಪ್ರವಾದಿ ಯೋನನು ಭಾಗ-2   ರಲ್ಲಿ........
                                                                                                                    - Bro Prabhu


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು